ಮುಳ್ಳಳ್ಳಿಯ ಶ್ರೀ ನಿ. ಪ್ರ. ಚನ್ನವೀರ ಸ್ವಾಮಿಗಳು : . (೧೯೨೦)

ಮುಳ್ಳಳ್ಳಿಯ ಶ್ರೀ ನಿ. ಪ್ರ. ಚನ್ನವೀರ ಸ್ವಾಮಿಗಳು : . (೧೯೨೦)

ಮುಳ್ಳಳ್ಳಿಯ ಶ್ರೀ ನಿ. ಪ್ರ. ಚನ್ನವೀರ ಸ್ವಾಮಿಗಳು ಬಮ್ಮನಹಳ್ಳಿ (ತಾ. ಹಾನಗಲ್ಲ) ಹಿರೇಮಠದಲ್ಲಿ ಜನ್ಮ ತಾಳಿದರು.

ಅಲ್ಲಿಯ ವಿರಕ್ತ ಮಠದ ವತಿಯಿಂದ ೪ನೆಯ ವಯಸ್ಸಿನಲ್ಲಿ ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದರು. ಪಡೇಕನೂರ ಪಂ. ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ಸಾಹಿತ್ಯ-ವ್ಯಾಕರಣ ಪಾಠಗಳನ್ನು ಕಲಿತು ಶಿವಯೋಗ ಸಾಧನೆಯಲ್ಲಿ ಆಸಕ್ತಿವಹಿಸಿದರು.

೧೯೪೨ರಲ್ಲಿ ಗದಗಿನ ಶ್ರೀ ಮಾನ್ವಿ ಸಿದ್ಧರಾಮಪ್ಪನವರ ಪ್ರಯತ್ನದಿಂದ ಮುಳ್ಳಳ್ಳಿ (ತಾ. ಕುಂದಗೋಳ, ಜಿ. ಧಾರವಾಡ)ಯ ವಿರಕ್ತ ಮಠಕ್ಕೆ ಅಧಿಕಾರಿಗಳಾಗಿ ಬಂದರು. ಈ ಮಠದ ಮೂಲ ಕರ್ತೃಗಳು ಶ್ರೀ ಚೆನ್ನವೀರ ಸ್ವಾಮಿಗಳು ಪರಮ ತಪಸ್ವಿಗಳು ಅವರ ತರುವಾಯ ಶ್ರೀ ಮಹಾಂತ ಸ್ವಾಮಿಗಳು, ಶ್ರೀ ಮುದಿಯಜ್ಜ ಸ್ವಾಮಿಗಳು, ಶ್ರೀ ಮುದ್ವೀರ ಸ್ವಾಮಿಗಳು, ಶ್ರೀ ಚೆನ್ನವೀರ ಸ್ವಾಮಿಗಳು ಹೀಗೆ ಪರಂಪರೆ ನಡೆದು ಬ೦ದಿದೆ.

ಈ ಮಠದ ಹಿಂದಿನ ಕೆಲವು ಶ್ರೀಗಳು ವ್ಯಾಕರಣ-ತರ್ಕ ಶಾಸ್ತ್ರಗಳಲ್ಲಿ ಬಹಳ ಪಂಡಿತರಾಗಿದ್ದರು. ಮಠದಲ್ಲಿ ಪ್ರಾಚೀನ ಓಲೆಗರಿ ಸಾಹಿತ್ಯವು ವಿಪುಲವಾಗಿದೆ. ಶ್ರೀ ಚನ್ನವೀರ ಸ್ವಾಮಿಗಳು ಅದನ್ನು ಮಂದಿರದ ಗ್ರಂಥಾಲಯಕ್ಕೆ ಅರ್ಪಿಸಿದ್ದಾರೆ. ಶ್ರೀಗಳವರು ಮಠದ ಅಭಿವೃದ್ಧಿಯನ್ನು ಮಾಡಿ ಪ್ರತಿವರ್ಷ ರಥೋತ್ಸವ ಜರುಗಿಸಿ ಪುರಾಣ ಪ್ರವಚನ-ಕೀರ್ತನಗಳಿಂದ ಜನರಲ್ಲಿ ಜಾಗ್ರತಿ ತರುತ್ತಿದ್ದಾರೆ.