ಬಾರಂಗಿ ಕೂಡ್ಲಿಯ ಶ್ರೀ ನಿ. ಪ್ರ. ಸದಾನಂದ ಸ್ವಾಮಿಗಳು : . (೧೯೨೦)

 ಬಾರಂಗಿ ಕೂಡ್ಲಿಯ ಶ್ರೀ ನಿ. ಪ್ರ. ಸದಾನಂದ ಸ್ವಾಮಿಗಳು : . (೧೯೨೦)

ಬಾರಂಗಿ ಕೂಡ್ಲಿಯ ಶ್ರೀ ನಿ. ಪ್ರ. ಸದಾನಂದ ಸ್ವಾಮಿಗಳು  ಪುರದಮಠ (ತಾ. ಸಿದ್ದಾಪುರ, ಜಿ. ಕಾರವಾರ) ದಲ್ಲಿ ಜನ್ಮ ತಾಳಿದರು. ಶಿವಯೋಗಮಂದಿರದಲ್ಲಿ ಪಂ. ರೇವಣಸಿದ್ಧ ಶಾಸ್ತ್ರಿಗಳಿಂದ ಶಿಕ್ಷಣ ಪಡೆದು ಶಿವಯೋಗ ಮತ್ತು ಷಟ್ಕರ್ಮ ಯೋಗದಲ್ಲಿಯೂ ಸಾಧನೆ ಮಾಡಿದರು.

೧೯೨೭ ರಲ್ಲಿ ಬಾರಂಗಿ ಕೂಡ್ಲಿ (ತಾ. ಸಾಗರ ಜಿ. ಶಿವಮೊಗ್ಗ) ಯ ವಿರಕ್ತ ಮಠಕ್ಕೆ ಅಧಿಕಾರಿಗಳಾದರು. ಈ ಮಠವು ಬಹಳ ಪ್ರಾಚೀನವಾದುದು. ಕಲ್ಯಾಣಕ್ರಾಂತಿಯ ನಂತರ ಬಸವಾದಿ ಪ್ರಮಥರು ನಾಡಿನಲ್ಲಿ ಅಲ್ಲಲ್ಲಿ ನೆಲಸಿದರು. ಆಗ  ಈ ಮಠದ ಮೂಲ ಪುರುಷರು ಹೂವಿನ ಹಿಪ್ಪರಗಿಯಲ್ಲಿ ಬಂದು ಸ್ಥಿರವಾದರು. ಅಲ್ಲಿಂದ ಭೂಪಾಲರಾಜನ ಕಾಲಕ್ಕೆ ಬಾಗೇವಾಡಿಗೆ ಬಂದರು. ಅಲ್ಲಿಂದ ಹರಿಹರರಾಯನ ಕಾಲಕ್ಕೆ ಹಂಪೆಯಲ್ಲಿ, ಅಲ್ಲಿಂದ ನರಗುಂದ, ಗುತ್ತಿಗೆ ಮಾರ್ಗವಾಗಿ ಕೆಳದಿ, ಇಕ್ಕೇರಿ, ನಗರಸೀಮೆಗೆ ಬಂದು ನೆಲೆಯಾದರು.

ನಗರ ರಾಜ್ಯವು ಹಾಳಾದ ಮೇಲೆ ಶ್ರೀ ಚೆನ್ನಬಸವ ಶಿವಯೋಗಿಗಳು ಇಲ್ಲಿ ಬಂದು ಮಠವನ್ನು ಸ್ಥಾಪಿಸಿದರು. ಶಿವಶರಣರ ಮಡಿವಾಳ ಮಾಚಿದೇವರ ಶಿಷ್ಯರಾದ ಯಾವತ್ತು ಮಡಿವಾಳರು ಹಾಗೂ ಉಪ್ಪಾರರೂ ಈ ಮಠಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕಾರ್ತಿಕ, ದಸರೆ, ಶಿವರಾತ್ರಿಯ ಕಾಲಕ್ಕೆ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತಿದೆ. ಶ್ರೀಗಳವರು ಈ ಭಾಗದ ಜನಗಳಲ್ಲಿಯ ಲೋಪದೋಷಗಳನ್ನು ತಿದ್ದಿ ಅವರಲ್ಲಿ ವಿವೇಕ-ಸದ್ಭಾವನೆಯುಂಟಾಗುವಂತೆ ಮಾಡುತ್ತಿದ್ದಾರೆ. ಲಿಂಗನಮಕ್ಕಿ ಆಣೆಕಟ್ಟಿನ ದೆಶೆಯಿಂದ ಈ ಮಠದ ಸ್ಥಳಾಂತರವಾಗಲಿದೆ.