ಕುಷ್ಟಗಿಯ ಶ್ರೀ ಘ. ಚ. ಪಟ್ಟದ ಕರಿಬಸವ ಶಿವಾಚಾರ್ಯರು :(೧೯೧೨)
ಕುಷ್ಟಗಿಯ ಶ್ರೀ ಘ. ಚ. ಪಟ್ಟದ ಕರಿಬಸವ ಶಿವಾಚಾರ್ಯರು ಹಿರೇಮಠದ ಅಧ್ಯಕ್ಷರಾಗಿದ್ದಾರೆ. ರಾಯಚೂರ ಜಿಲ್ಲೆಯ ಗುರುಪೀಠಗಳಲ್ಲಿ ಕುಷ್ಟಗಿಯ ಹಿರಿಯ ಮಠವು ಬಹಳ ಪ್ರಸಿದ್ಧವಾದುದು. ತಪಸ್ವಿ ಶ್ರೀಮದ್ದಾನಿ ಕರಿಬಸವ ಸ್ವಾಮಿಗಳು ಈ ಗುರುಪೀಠದ ಮೂಲಕರ್ತರು. ಶ್ರೀ ಕರಿಬಸವ ಪಟ್ಟಾಧ್ಯಕ್ಷರು ಪಂ. ಉಮಚಗಿಯ ಶಂಕರ ಶಾಸ್ತ್ರಿಗಳು ಮತ್ತು ಬಿದರಿ ಶಿವಲಿಂಗ ಶಾಸ್ತ್ರಿಗಳಲ್ಲಿ ನ್ಯಾಯಶಾಸ್ತ್ರವನ್ನು ಪಂಚಕಾವ್ಯಗಳನ್ನು ಅಭ್ಯಾಸ ಮಾಡಿದರು ಯೋಗಾಸನಗಳಲ್ಲಿ ಪರಿಪೂರ್ಣತೆ ಪಡೆದರು. ಅನುಷ್ಠಾನ ಪರರು ಮತ್ತು ಸಂಗೀತದಲ್ಲಿ ಸಾಕಷ್ಟು ಪರಿಶ್ರಮವುಳ್ಳವರು ಶಾ. ಶ. ೧೮೩೭ರಲ್ಲಿ ಮಠದ ಅಧಿಕಾರಿಗಳಾಗಿ ಮೂಲ ಮಠದ ಜೀರ್ಣೋದ್ಧಾರವಲ್ಲದೆ ಹಿರೇಮನ್ನಾಪುರ, ಹುಣಸಿಹಾಳ, ಬೋದೂರು, ಚಿಕ್ಕಮನ್ನಾಪುರ ಗ್ರಾಮಗಳಲ್ಲಿ ಹೊಸದಾಗಿ ಮಠಮಾನ್ಯಗಳನ್ನು ಸಂಪಾದಿಸಿದರು. ಅವುಗಳಲ್ಲಿ ಶಿವಲಿಂಗ ಮತ್ತು ನಂದೀಶ್ವರ ಪ್ರತಿಷ್ಠೆಗಳನ್ನು ಮಾಡಿಸಿರುವರು. ೨೦೦ಕ್ಕೂ ಮೇಲ್ಪಟ್ಟು ಭಕ್ತರಿಗೆ ಶಿವದೀಕ್ಷೆ ಸಂಸ್ಕಾರಗಳನ್ನು ಕೊಟ್ಟು ಸಮಾಜೋದ್ಧಾರ ಕಾರ್ಯ ಮಾಡಿಸಿರುವರು.