ಗುಳೇದಗುಡ್ಡದ ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು  (೧೯೧೯)

ಗುಳೇದಗುಡ್ಡದ ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು  (೧೯೧೯)

ಗುಳೇದಗುಡ್ಡದ ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು ಮುರಘಾಮಠದ ಅಧಿಪತಿಗಳಾಗಿದ್ದಾರೆ. ಅವರು ಶಿರಸಂಗಿ (ತಾ. ಸವದತ್ತಿಯ ಹಿರೇಮಠದಲ್ಲಿ ಜನ್ಮ ತಾಳಿದರು.

ಶಿವಯೋಗಮಂದಿರದಲ್ಲಿ ಪ್ರವೇಶ ಪಡೆದು ಪಂ. ಬಸವರಾಜ ಶಾಸ್ತ್ರಿಗಳು, ರಾಜಶೇಖರ ಶಾಸ್ತ್ರಿಗಳು ಮತ್ತು ರೇವಣಸಿದ್ಧ ಶಾಸ್ತ್ರಿಗಳವರಲ್ಲಿ ಶಾಸ್ತ್ರಾಭ್ಯಾಸ ಮಾಡಿ ಪ್ರವಚನ-ವ್ಯಾಖ್ಯಾನ ಪಟುಗಳಾದರು. ನಂತರ ಬೆಂಗಳೂರ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಶಿಕ್ಷಣ ಮುಂದುವರಿಸಿದ್ದರು.

೧೯೩೭ ರಲ್ಲಿ ಗುಳೇದಗುಡ್ಡ ಮುರಘಾಮಠದ ಅಧಿಕಾರವನ್ನು ವಹಿಸಿಕೊಂಡು ಅದನ್ನು ಊರ್ಜಿತಗೊಳಿಸಿದರು. ಈ ಮಠದ ಹಿಂದಿನ ಕೆಲವು ಶ್ರೀಗಳವರು ಶಿವಯೋಗಿಗಳೂ ಮತ್ತು ಕವಿಗಳೂ ಆಗಿದ್ದರು.

ವಚನಗಳಿಗೆ ಟೀಕೆಗಳನ್ನು ಬರೆದವರು. ಕಾವ್ಯಗಳನ್ನು ರಚಿಸಿದವರು. ಇದಕ್ಕೆ ಮಠದಲ್ಲಿರುವ ಉತ್ತಮ ತಾಳೆಗರಿ ಗ್ರಂಥಗಳ ಸಂಗ್ರಹವೇ ಸಾಕ್ಷಿಯಾಗಿದೆ. ಶ್ರೀಗಳವರು ಆಯುರ್ವೇದದಲ್ಲಿಯೂ ಬಲ್ಲಿದರು. ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ಮಾಡಿ ಸಮಾಜ ಸೇವೆಯನ್ನು ಮುಂದುವರಿಸಿದ್ದಾರೆ. ಪ್ರವಚನಗಳಿಂದ ಶಿವಾನುಭವ ಪ್ರಸಾರವನ್ನು ಮಾಡುತ್ತಿದ್ದಾರೆ.