ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ. ಚ. ಸಿದ್ಧಲಿಂಗ ಶಿವಾಚಾರ್ಯರು    : 1918

ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ. ಚ. ಸಿದ್ಧಲಿಂಗ ಶಿವಾಚಾರ್ಯರು    : 1918

 

ತಾವರಕೆರೆಯ ಶಿಲಾಮಠಾಧ್ಯಕ್ಷ ಶ್ರೀ ಘ. ಚ. ಸಿದ್ಧಲಿಂಗ ಶಿವಾಚಾರ್ಯರು  ಗಿರಿಯಾಪುರ (ತಾ. ಕಡೂರು, ಜಿ.  ಚಿಕ್ಕಮಗಳೂರು)ದಲ್ಲಿ ಜನಿಸಿದರು.

ಕನ್ನಡ ಲೋವರ ಸೆಕೆಂಡರಿವರೆಗೆ ವ್ಯಾಸಂಗ ಮಾಡಿ ಶಿವಯೋಗ ಮಂದಿರದಲ್ಲಿ ಪ್ರವೇಶ ಪಡೆದರು. ಪಂ. ಕೊಂಗವಾಡ ವೀರಭದ್ರ ಶಾಸ್ತ್ರಿಗಳವರಲ್ಲಿ ಪಂಚ ಕಾವ್ಯಗಳನ್ನು ಕಲಿತರು. ಅವರು ಹೆಚ್ಚಾಗಿ ಶಿವಯೋಗಾನುಷ್ಠಾನದಲ್ಲಿ ಆಸಕ್ತಿಯುಳ್ಳವರಾಗಿದ್ದರು. ನದಿಯ ತೀರದಲ್ಲಿ ಗುಹೆಯನ್ನು ಮಾಡಿಕೊಂಡು ಶಿವಪೂಜೆಯನ್ನು ಮಾಡಿಕೊಳ್ಳುತ್ತಿದ್ದರು.

೧೯೨೨ ರಿಂದ ತಾವರೆಕೆರೆ (ತಾ ಚೆನ್ನಗಿರಿ) ಮಠದ ಆಡಳಿತವನ್ನು ನೋಡಿಕೊಳ್ಳುತ್ತಿರುವರು. ಮಠದ ಭೂಮಿ ಸಂಪತ್ತನ್ನು ಹೆಚ್ಚಿಸಿ ಪ್ರತಿವರ್ಷ ಮಾರ್ಗಶಿರ ಬಹುಳದಲ್ಲಿ ಮಹೇಶ್ವರ ಜಾತ್ರೆಯನ್ನು ನಡೆಯಿಸುತ್ತಾರೆ. ಪುರಾಣ ಪ್ರವಚನಗಳಿಂದ ಜನತೆಯಲ್ಲಿ ಧಾರ್ಮಿಕ ಪ್ರವೃತ್ತಿಯನುಂಟು ಮಾಡುವ ಕಾರ್ಯಗಳನ್ನು ಕೈಗೊಂಡಿದ್ದಾರೆ.