ಕಲಬುರ್ಗಿಯ ಶ್ರೀ ಘ.ಚ. ಕೆಂಚಬಸವ ಪಟ್ಟಾಧ್ಯಕ್ಷರು.(1912)
ಕಲಬುರ್ಗಿಯ ಶ್ರೀ ಘ.ಚ. ಕೆಂಚಬಸವ ಪಟ್ಟಾಧ್ಯಕ್ಷರು ರೋಜಾ ಹಿರೇಮಠದ ಅಧಿಪತಿಗಳು.
ಅವರ ಜನ್ಮಸ್ಥಳ ವಿಜಾಪುರ ಜಿಲ್ಲೆಯ ಬಾಗಲಕೋಟಿ ತಾಲೂಕಿನ ಎಡಹಳ್ಳಿ. ಅವರು ಮಂದಿರದಲ್ಲಿ ಉಮಚಗಿಯ ಶಂಕರ ಶಾಸ್ತ್ರಿಗಳು, ಕೊಂಗವಾಡದ ವೀರಭದ್ರ ಶಾಸ್ತ್ರಿಗಳು ಮತ್ತು ರೇವಣಸಿದ್ಧಶಾಸ್ತ್ರಿಗಳವರಲ್ಲಿ ತರ್ಕ, ವೇದಾಂತ, ಸಾಹಿತ್ಯ, ವ್ಯಾಕರಣ ಶಾಸ್ತ್ರಗಳ ಅಧ್ಯಯನ ಮಾಡಿ ಪುರಾಣ ಪ್ರವಚನ ಪಟುಗಳಾದರು.
೧೯೪೬ರಲ್ಲಿ ರೋಜಾ ಹಿರೇಮಠದ ಅಧಿಕಾರವನ್ನು ವಹಿಸಿಕೊಂಡರು. ಗುಲಬರ್ಗಾ (ಕಲಬುರ್ಗಿ) ದಲ್ಲಿ ‘ಸತ್ಸಂಗʼ ಎಂಬ ಸಂಘವನ್ನು ಸ್ಥಾಪಿಸಿ ಅದರ ಮುಖಾಂತರ ಪ್ರವಚನಗಳಿಂದ ವೀರಶೈವ ಧರ್ಮ ಬೋಧೆಯನ್ನು ಮಾಡುತ್ತಿರುವರು.
ಶ್ರೀ ಪಟ್ಟಾಧ್ಯಕ್ಷರು ಸಾರಡಗಿ, ಹರಸೂರು, ಮಹಾಗಾಂವ ಮೊದಲಾದ ಕಡೆ ಸಂಚರಿಸಿ ಶಿವಾನುಭವ ಪ್ರಸಾರವನ್ನು ಮಾಡಿರುವರು. ರಾವೂರು, ಗುಳೇದಗುಡ್ಡ ಮೊದಲಾದ ನಗರಗಳಲ್ಲಿ ಪುರಾಣಗಳನ್ನು ಹೇಳಿ ಜನರಲ್ಲಿ ಜಾಗ್ರತಿಯನ್ನು ಉಂಟುಮಾಡಿರುವರು.