ಹಾರ್ನಹಳ್ಳಿಯ ಶ್ರೀ ನಿ. ಪ್ರ. ಗುರುಲಿಂಗ ಸ್ವಾಮಿಗಳು :೧೯೧೫
ಹಾರ್ನಹಳ್ಳಿಯ ಶ್ರೀ ನಿ. ಪ್ರ. ಗುರುಲಿಂಗ ಸ್ವಾಮಿಗಳು ಕೋಡಿಮಠದ ಅಧಿಪತಿಗಳಾಗಿದ್ದರು. ಶ್ರೀ ಗುರುಲಿಂಗ ದೇವರು ಮಂದಿರದಲ್ಲಿ ೧೫ ವರ್ಷ ಕನ್ನಡ-ಸಂಸ್ಕೃತ ವಿದ್ಯಾ ವ್ಯಾಸಂಗವನ್ನು ಪೂರೈಸಿ ಯೋಗದಲ್ಲಿಯೂ ನಿಷ್ಣಾತರಾಗಿ ಹಾನಗಲ್ಲ ಶ್ರೀಗಳವರಿಂದ ಆಯುರ್ವೇದ ವಿದ್ಯೆಯನ್ನು ಸಂಪಾದಿಸಿದರು.
ಅವರು ವನಸ್ಪತಿಗಳಿಂದ ಉತ್ತಮ ಔಷಧಿಗಳನ್ನು ತಯಾರಿಸಿ ಉಚಿತವಾಗಿಯೇ ರೋಗಿಗಳಿಗೆ ಚಿಕಿತ್ಸೆಯನ್ನು ಮಾಡುತ್ತಿದ್ದರು. ಹಾನಗಲ್ಲ ಶ್ರೀಗಳವರ ಅಪ್ಪಣೆಯ ಮೇರೆಗೆ ಕೆ. ಬಿದರೆಯ ಪ್ರಭುಕುಮಾರ ಪಟ್ಟಾಧ್ಯಕ್ಷರು ಶ್ರೀ ಗುರುಲಿಂಗ ದೇಶಿಕರನ್ನು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿರುವ ಪ್ರಸಿದ್ಧವಾದ ಶ್ರೀ ಕೋಡಿಮಠಕ್ಕೆ ಅಧಿಕಾರಿಗಳನ್ನಾಗಿ ಮಾಡಿದರು.
ಹಾಸನದ ಜವಹರನಹಳ್ಳಿ ಮಠದ ಶ್ರೀ ಚಿಕ್ಕಶಾಂತವೀರ ಮಹಾಸ್ವಾಮಿಗಳು ಆಶ್ರಮಾಧಿಕಾರ ದಯಪಾಲಿಸಿದರು. ಶ್ರೀ ಗುರುಲಿಂಗಸ್ವಾಮಿಗಳು ೫೦ ವರ್ಷಗಳಿಂದ ಅನಾಯಕವಾದ ಮಠವನ್ನು ಶ್ರಮವಹಿಸಿ ವ್ಯವಸ್ಥಿತವಾಗಿಟ್ಟರು. ಅಕಾಲದಲ್ಲಿಯ ಅಧಿಕಾರ ವಹಿಸಿದ ಮೂರು ವರ್ಷಗಳಲ್ಲಿಯೇ ಲಿಂಗೈಕ್ಯರಾದರು