ಕಿತ್ತೂರ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು :(1915)

ಕಿತ್ತೂರ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು :

 ಕಿತ್ತೂರ ಶ್ರೀ ನಿ. ಪ್ರ. ಚೆನ್ನಬಸವ ಸ್ವಾಮಿಗಳು ಕಲ್ಮಠದ ಅಧಿಕಾರಿಗಳು. ಅವರು ಮಂದಿರದಲ್ಲಿದ್ದು ಕನ್ನಡ-ಸಂಸ್ಕೃತ ವಿದ್ಯಾ ವ್ಯಾಸಂಗವನ್ನು ಮಾಡಿ ಶಿವಯೋಗ ಸಾಧನೆಯಲ್ಲಿಯೇ ಯೋಗ್ಯತೆ ಪಡೆದವರು. ಕಿತ್ತೂರಿನ ಕಲ್ಮಠ ಇತಿಹಾಸ ಪ್ರಸಿದ್ಧವಾದ ವಿರಕ್ತಪೀಠ.

ಅದರ ಅಧಿಪತಿಗಳು ಕನ್ನಡ ನಾಡಿನಲ್ಲಿ ಸ್ವಾತಂತ್ರ್ಯ ಕ್ರಾಂತಿಯನ್ನು ಮಾಡಿದ ವೀರಮಹಿಳೆ ಶ್ರೀ ಚೆನ್ನಮ್ಮರಾಣಿಗೆ ಮಾರ್ಗದರ್ಶನ ಮಾಡಿದರು. ಶ್ರೀಗಳವರು ಕಿತ್ತೂರ ಸಂಸ್ಥಾನದ ಇತಿಹಾಸ ಸಂಶೋಧಕ ಮಂಡಳಿಗೆ ಅನೇಕ ಮುಖವಾಗಿ ನೆರವಾಗಿದ್ದಾರೆ.