ಹಾನಗಲ್ಲ ಶ್ರೀ ನಿ. ಪ್ರ. ಮಹೇಶ್ವರ ಸ್ವಾಮಿಗಳು:(1912)
ಹಾನಗಲ್ಲ ಶ್ರೀ ನಿ. ಪ್ರ. ಮಹೇಶ್ವರ ಸ್ವಾಮಿಗಳು ದಮ್ಮೂರಲ್ಲಿ (ತಾ. ಹುನಗುಂದ) ಜನ್ಮತಾಳಿ ಆದಾಪುರದ ಹಿರಿಯ ಮಠದ ವತಿಯಿಂದ ಮಂದಿರಕ್ಕೆ ಶಿಕ್ಷಣ ಪಡೆಯಲು ಬಂದರು. ಅವರು ಬಹಳ ಸರಳ ಜೀವಿಗಳಾಗಿದ್ದರು. ಪಂ. ವೀರಭದ್ರ ಶಾಸ್ತ್ರಿಗಳವರಲ್ಲಿ
ಸಾಹಿತ್ಯ, ವ್ಯಾಕರಣ, ವೇದಾಂತ ವಿಷಯಗಳ ಅಧ್ಯಯನ ಮಾಡಿ ಭಾಷಣ ಕಲೆಯನ್ನು ಸಾಧಿಸಿದ್ದರು. ಅವರ ಸಾತ್ವಿಕ ವೃತ್ತಿಯನ್ನು ಕಂಡು ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಭಕ್ತಾದಿಗಳ ಸಮ್ಮತಿಯಿಂದ ಜಡೆಮಠ ಶ್ರೀಗಳವರಿಂದ ಹಾನಗಲ್ಲಮಠದ ಅಧಿಕಾರವನ್ನು ಕೊಡಿಸಿದರು.
ಶ್ರೀ ಮಹೇಶ್ವರ ಸ್ವಾಮಿಗಳವರು ಹೊರಬ, ಸಾಗರ ಮತ್ತು ಅಕ್ಕಿ ಆಲೂರ ಶಾಖಾಮಠಗಳನ್ನು ವ್ಯವಸ್ಥಿತಗೊಳಿಸಿದರು. ಅಕ್ಕಿಅಲೂರ ವಿರಕ್ತಮಠದಲ್ಲಿಯ ಸಂಸ್ಕೃತ ಪಾಠಶಾಲೆಯ ಸಂಚಾಲಕರಾಗಿ ಅದನ್ನು ಒಳ್ಳೆ ಆಸ್ಥೆಯಿಂದ ನಡೆಯಿಸಿದರು. ೧೯೨೯ರಲ್ಲಿ ಆಲೂರ ರಥೋತ್ಸವವನ್ನು ಪ್ರಾರಂಭಿಸಿ ಹಿಂದಿನ ಶ್ರೀ ಅಡವಿ ಸ್ವಾಮಿಗಳ ಇಚ್ಛೆಯನ್ನು ಪೂರ್ಣ ಮಾಡಿದರು.
ಮಲೆನಾಡ ಪ್ರದೇಶದಲ್ಲಿ ಧರ್ಮ ಜಾಗ್ರತಿಯನ್ನು ಮೂಡಿಸಿದರು. ದುರ್ದೈವದಿಂದ ಚಿಕ್ಕ ವಯದಲ್ಲಿಯೇ ದಿನಾಂಕ ೨೯-೩-೩೩ ರಂದು ಲಿಂಗೈಕ್ಯರಾದರು.