ಪ್ರಸ್ಥಾವನೆ
ಬರುವ ೨೦೩೦ನೆಯ ವರ್ಷ ಪರಮಪೂಜ್ಯ ಶ್ರೀ ಕುಮಾರ ಮಹಾಸ್ವಾಮಿಗಳವರ “ಲಿಂಗೈಕ್ಯ ಶತಮಾನೋತ್ಸವ ವಾದುದರ ಪವಿತ್ರ ಸ್ಮರಣೆಗೆ ಪೂಜ್ಯರು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದಲ್ಲಿ ೧೯೦೯ ರಿಂದ ಇಲ್ಲಿಯವರೆಗೆ ಶಿವಾನುಭವ ಸಂಪದ ಪಡೆದ ಶ್ರೀಗಳ ,ಸಾಹಿತಿಗಳ,ವಿದ್ವಾಂಸರ ಮತ್ತು ಸಂಗೀತಕಾರರ ಪರಿಚಯಗಳನ್ನು ಅಂತರ್ಜಾಲದಲ್ಲಿ ಪ್ರಕಾಶಿಸುವ ಮತ್ತು ೨೦೩೦ಕ್ಕೆ ಗ್ರಂಥ ರೂಪದಲ್ಲಿ ಶ್ರೀ ಶಿವಯೋಗಮಂದಿರದ ಪ್ರಕಾಶನದಲ್ಲಿ ಪ್ರಕಟಿಸುವ ಯೋಜನೆ ನಮ್ಮ ಸೇವಾ ಸಮಿತಿಯದ್ದಾಗಿರುತ್ತದೆ.
ಅಂತರ್ಜಾಲದ ಪ್ರಕಾಶನವನ್ನು ತ್ವರಿತವಾಗಿ ಮೊದಲು ಆರಂಭಿಸಿ ಕಾಲಕಾಲಕ್ಕೆ ಶ್ರೀ ಗಳ ಸಾಧನೆ -ಕೊಡುಗೆಗೆಗಳನ್ನು ವಿಸ್ತರಿಸುತ್ತ ಅಂತಿಮವಾಗಿ ೨೦೩೦ ರೊಳಗಾಗಿ ಹಂತ -ಹಂತ ವಾಗಿ ಸಂಪುಟಗಳ ರೂಪದಲ್ಲಿ ಮುದ್ರಿಸುವ ಯೋಜನೆ ನಮ್ಮದು. ಈ ಯೋಜನೆಗೆ ಮಾಹಿತಿ ಸಂಗ್ರಹ ಅತ್ಯಂತ ವಿಶೇಷ ಕಾಳಜಿಯಿಂದ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಈಗಿಂದಲೇ ಆರಂಭಿಸುತ್ತಿದ್ದೇವೆ.
ನಮ್ಮ ಸಮಾಜ ಧರ್ಮ,ಶಿಕ್ಷಣ,ಸಾಹಿತ್ಯ ಮತ್ತು ಸಂಸ್ಕೃತಿಗೆ ಶಿವಯೋಗಮಂದಿರ ಸಾಧಕರಾಗಿ ತಾವು ನೀಡಿದ ಕೊಡುಗೆಗಳ ಜೊತೆಗೆ ,ಜಾತಿ ಪಂಥಗಳ ಭೇಧವಿಲ್ಲದೆ ಸಾಮಾಜಿಕ ಕಳಕಳಿಯಿಂದ ನಾಡಿನ ತನ್ಮೂಲಕ ರಾಷ್ಟ್ರ ಸೇವೆ ಸಲ್ಲಿಸುತ್ತಿರುವ ತಮ್ಮನ್ನು ಜಗತ್ತಿನಾದ್ಯಂತ ಪರಿಚಯಿಸುವ ಮತ್ತು ತಮ್ಮ ಅಮೂಲ್ಯ ಕಾರ್ಯಚಟುವಟಿಕೆಗಳನ್ನು ದಾಖಲಿಸುವ ಪುಣ್ಯ ನಮ್ಮದು.
. ದಯವಿಟ್ಟು ತಮ್ಮ ಮತ್ತು ತಮ್ಮ ಶ್ರೀಮಠದ ಹಿರಿಯ ಶ್ರೀಗಳು ಶ್ರೀ ಶಿವಯೋಗಮಂದಿರದ ಸಾಧಕರಾಗಿದ್ದಲ್ಲಿ ಕಿರು ಪರಿಚಯ (೧ ರಿಂದ ೫ ಪುಟಗಳ) ಲೇಖನಗಳನ್ನು ವರ್ಡ ಫೈಲನಲ್ಲಿ ಒದಗಿಸಲು ಪ್ರಾರ್ಥನೆ.
ಇ.ತಿ. ಶಿ.ಸಾ.ನಮಸ್ಕಾರಗಳೊಂದಿಗೆ,
ತಮ್ಮ ವಿಶ್ವಾಸಿ
ಶ್ರೀಕಂಠ.ಚೌಕೀಮಠ.
ಸೇವಕ-ಅಧ್ಯಕ್ಷ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಸೇವಾ ಸಮಿತಿ (ಟ್ರಸ್ಟ) ನವದೆಹಲಿ